Monday, February 14, 2011

ಗೆಳತಿ ಕುರಿತು ಬರೆದ ಕವಿತೆಗಳು

ಪಿಯು ಓದುತ್ತಿದ್ದ ದಿನಗಳಲ್ಲಿ ಹಾಗೆ ಒಂದಷ್ಟು ಕವಿತೆಗಳನ್ನು ಬರೆದಿದ್ದು ನೆನಪಿದೆ. ಆಗ ಪರಿಚಿತಳದವಳೇ ಗೆಳತಿ. ಗೆಳತಿ ಕವಿತೆಯಾಗಿ, ಬದುಕಾಗಿ, ನನಗೆ ಪ್ರಶ್ನೆಗಳನ್ನು ಕೇಳುತ್ತಾ, ಉತ್ತರಗಳನ್ನು ಹುಡುಕುತ್ತಾ ಹೊರಹೊಮ್ಮಿದವಳು. ಇದು ಯಾರ ನೆನಪು ಅಲ್ಲ; ಯಾವ ಹುಡುಗಿಯೂ ಅಲ್ಲ.
ಕೆಲ ಸ್ನೇಹಿತರು ತಮ್ಮ ಹುಡುಗಿಯರಿಗೆ ಪ್ರೇಮಪತ್ರ ಬರೆದುಕೊಡು ಅಂತ ಕೇಳಿಕೊಳ್ಳುತ್ತಿದ್ದಾಗ ಈ ಕೆಳಗಿನ ಕೆಲವು ಸಾಲುಗಳನ್ನು ಸೇರಿಸಿ ಪತ್ರಗಳನ್ನು ಬರೆದುಕೊಡುತ್ತಿದ್ದೆ. ಕೊಡುವಾಗ ಒಂದು ಸಣ್ಣ ಕಿಂಡಲ್ ಮಾಡುತ್ತಿದ್ದೆ. `ನಾನು ಕೊಟ್ಟೆ ಅಂತ ಹೇಳು' ಎಂದು. ಅವನಿಗೆ ಕೋಪ ಒಮ್ಮಿಲ್ಲೊಮೆ ಬಂದು ಬಿಡುತ್ತಿತ್ತು. ಅದೆಲ್ಲ ಇರಲಿ... ಒಮ್ಮೆ ಓದಿ ಹೇಳಿ

-ನಿಮ್ಮ ಪುರು


ಗೆಳತಿ
ನಿನ್ನ ಕಿರುನಗೆ ಸಾಕು
ನನ್ನೊಡಲ ಕಮಲ
ಅರಳಲು...



ಗೆಳತಿ
ಪುಟ ಪುಟದ
ತಿರುವಿನಲ್ಲೂ
ನಿನ್ನದೇ ನೆನಪು
ಇದು ಪ್ರೀತಿ ತಾನೆ.



ಗೆಳತಿ
ಸಪ್ತಸ್ವರಗಳೇಕೆ?
ನಿನ್ನ ಕಾಲ್ಗೆಜ್ಜೆಯ
ನಾದ ಸಾಕು
ನನ್ನ ಹೃದಯದ ಹಾಡ ಹಾಡಲು...


ಗೆಳತಿ
ಭಾವನೆಗಳ ಬಂಡಾರ
ಬರಿದಾಗುವುದಿಲ್ಲ.
ಅವು ನೂರಾರು ಪ್ರೀತಿ
ಪದಗಳಾಗಿ ನಿನ್ನ ಮನ
ಮುಟ್ಟಲು ಹಾತೊರೆಯುತ್ತಿವೆ.


ಗೆಳತಿ
ಪ್ರತಿ ಸಾರಿ ಹೊತ್ತು
ತರುವ
‘ನೆಪ’ದ ಬುಟ್ಟಿ
ಘಾಸಿಗೊಳಿಸದೇ ಎನ್ನ ಮನವ!



ಗೆಳತಿ
ನಿನ್ನ ಕೆಂದುಟಿಗೆ
ಮಧು ತುಂಬುವೆ
ಎಂದಾಗ
ನಿನ್ನ ಹುಸಿಮುನಿಸ ಕಂಡು
ನಾ ನಲಿದೆ.


ಗೆಳತಿ
ಮುಗಿಯುತ್ತಿಲ್ಲ
ಈ ಕವಿತೆಗಳ ಸಾಲು ಸಾಲು!
ಪವಿತ್ರ ಪ್ರೇಮಕ್ಕೆ
ಸಿಗಬಹುದೇ ಗೆಲುವು?



ಗೆಳತಿ
ಬರುವುದೆಲ್ಲವೂ ಬರಲಿ
ಸ್ವೀಕರಿಸಲು ನಾನಿದ್ದೇನೆ.
ಬಿರುಗಾಳಿಗೂ ಉದುರದ
ತರಗಲೆಯಂತೆ...


ಗೆಳತಿ
ನೀ ಕೊಡುವ ಸವಿಯೊಂದಿಗೆ
ನಂಜು ಬೆರೆತರು
ನನಗದು ಅಮೃತ.


ಗೆಳತಿ
ಕತ್ತಲೆಯ ಜಗವಿದು
ಏನೂ ಕಾಣದು
ಆದರೂ ಕಾಣುತ್ತಿದೆಯಲ್ಲ
ನಿನ್ನ ಪ್ರತಿರೂಪ



ಗೆಳತಿ
ನಿನ್ನ ಹೊಗಳಲು
ಪದಗಳೆ ಸಿಗುತ್ತಿಲ್ಲವೆಂದರೆ
ತಪ್ಪಾದಿತು
ಏಕೆಂದರೆ ನೀನು ರಂಭೆಯೂ ಅಲ್ಲ
ಊರ್ವಶಿಯೂ ಅಲ್ಲ
ನನ್ನ ಮನಗೆದ್ದ ಮಲ್ಲಿಗೆ.


ಗೆಳತಿ
ಅಚ್ಚಗಿರುವ
ಈ ಹೃದಯದ
ಮುಂದೆ
ಪೆಚ್ಚ್ಚಾಗಿ ಬಿದ್ದಿರುವ ನಿನ್ನ
ಫೋಟೋ ಏಕೆ?



ಗೆಳತಿ
ಪ್ರೀತಿಗೆಲ್ಲಿದೆ ಭಾಷೆ
ಹೃದಯ ಭಾಷೆವರೆತೂ...
ಕೆಲವೊಮ್ಮೆ ಪ್ರೇಮಿಗಳದು
ಮೂಕ ಭಾಷೆ.


ಗೆಳತಿ
ಆಕರ್ಷಣೆಯೆ ಪ್ರೀತಿಯಾಗಿದ್ದರೆ
ಆಕರ್ಷಿಸುವವರ
ಮುಂದೆ ನಾ ನೀರಿನಿಂದ
ಹೊರ ಬಿದ್ದ
ಮೀನಿನಂತೆಯೇ ಸರಿ.


ಗೆಳತಿ,
ನಿನ್ನ ಅನುರಾಗವು ಹೊತ್ತು
ತರುವ ಅಲೆಗಳಿಂದ
ನಾನು ಕನಸುಗಳಿಗೆ
ಶರಣಾಗಿದ್ದೇನೆ.


ಗೆಳತಿ
ನೆನಪಿದೆಯಾ ಮೊದಲ ಭೇಟಿ
ಇರುಳ ಚಂದ್ರನ ನಡುವೆ
ಪರಿಚಯಿಸಿಕೊಂಡ ರೀತಿ...


ಗೆಳತಿ
ಹುಮ್ಮಳಿಸಿ
ಬರುವ
ದುಃಖಕ್ಕೆ
ಜಲಧಾರೆಯೇ ಉಡುಗೊರೆ.


ಗೆಳತಿ
ನಾನು ಕುರುಡ
ನೀನು ಕುರುಡಿ
ಬದುಕು ಮಾತ್ರ
ಬೆಳಕ ಕಂಡಿತು.


ಗೆಳತಿ
ಮತ್ತೆ ನೆನಪಾದೆ ನೀನು
ಕವಿತೆಗಳಿಗೆ ಜೀವ
ತುಂಬಲು.


ಗೆಳತಿ
ಕಳೆದುಕೊಳ್ಳಲೇನೊ ಸಿದ್ಧ
ನಿನ್ನ ಪ್ರೀತಿಯನ್ನಲ್ಲ.
ಪ್ರೀತಿ ಕಳೆದುಕೊಂಡ
ಆ ಕ್ಷಣವನ್ನ...



ಗೆಳತಿ
ನಂಬಿಕೆಯೇ
ಪ್ರೀತಿಯೆಂದರು
ನಂಬಿಕೆಯನ್ನೇ ಅಡವಿಟ್ಟು
ಪ್ರೀತಿ ಕೊಂದರು.


ಗೆಳತಿ
ಯಾರಿರುವರೂ ಹೇಳು
ನನಗೆ
ಪ್ರೀತಿ ತೋರಲು
ಕಲ್ಲು ಬಂಡೆಯ ಹಾಗೆ
ಒಂಟಿ ಬದುಕು
ಪ್ರೀತಿ ಇಲ್ಲದ ಮೇಲೆ....



ಗೆಳತಿ
ನಿನ್ನ ಪವಿತ್ರ
ಹೃದಯದ ವೀಣೆಯ
ನುಡಿಸುವ ಅರ್ಹ ವ್ಯಕ್ತಿ
ನಾನೇ ತಾನೆ?


ಗೆಳತಿ
ನಿನ್ನ ಬಿಗಿದ ತುಟಿಯಿಂದ
ಸಡಿಲಗೊಂಡ ಮಿಂಚು ನಗೆಗೆ
ಓಟಕಿತ್ತಿತೇ ಬೇಸರ..


ಗೆಳತಿ
ನಾ ಮೂಢ
ನೀ.. ನನ್ನ ಒಮ್ಮೆ
ತಿರುಗಿ ನೋಡ..

3 comments:

Unknown said...

waw......... reallyyyyyyyyyy superb sir.............

nenapu kanasugala naduve said...

bahalastu chennagive...kelavanthu adbuthavaagive.. sada raajakeeya ettikondu badidaduva nimmolagu olavina kandeelu uriyuthide...

Unknown said...

preyasiya preeti tumbikondiruv kavi hrudayakke ee gelatiya namaskara galu...

nimma kavite tumba chennagide.. Itara bhavanegalu preeti madiro mansinda barutte ankoltini..

anyway all the best for u dear frnd..