Thursday, January 27, 2011

ಸ್ಮಶಾನ ಮೌನ


ನಡುರಾತ್ರಿಯಲ್ಲಿ
ದಿಟ್ಟಿಸುವ ಈ ಕಣ್ಣಗಳಲ್ಲಿ
ಕಟ್ಟಿದ ನೂರಾರು ಕನಸುಗಳು
ಕುಡಿದೀಪದಂಚಿನಲ್ಲಿ
ಉರಿಯುವುದು ಸರಿಯೇ...?

ನಾ ಬಂದೆ
ನೀ ಹೋದೆ
ಎಂಬ ಭ್ರಾಂತಿನಲ್ಲಿ
ಅತ್ತಿತ್ತ ತಡಕಾಡಿದರೂ
ಬಯಲಲ್ಲಿ ಬೆಳಕಷ್ಟೆ ಉಳಿದಿವುದು

ನೆರಳ ಹಿಂಬಲಿಸುವುದಿಲ್ಲ;
ನಂಬುಗೆಯ ಸುಳಿವಿಲ್ಲ
ಸೂತಕದ ವಿಷಯವೊಂದಿದೆ;
ಒಲವೇ ಒಲವ ಕೊಂದಿದೆ
ಕನಸುಗಳ ರೂಪದಲ್ಲಿ...

ಪ್ರಜ್ವಲಿಸಿದ ಬೆಳಕಲ್ಲಿ
ಸುಟ್ಟು ಕರಕಲಾದರೂ
ಉಳಿದದ್ದು;
ನಿನ್ನ ನೆನಪು, ಕುಡಿದೀಪ
ಆ ಸ್ಮಶಾನಮೌನವಷ್ಟೆ!



3 comments:

Kanthi said...

nice one.. but i always see some pessimistic feeling in your poems..

Unknown said...

gud one........ sir.

subramanya sk said...

nimma chutukugalu tumba sogasagive artha garbithavagive
smashana mouna jeevanada vaasthavavannu bimbisuttde thaayiya thyaga nenapagattade nimma kavana odidare satta nanna thaayiya nenapaguttade.....