Monday, February 14, 2011

ಈ ಮಣ್ಣಿನ ಒಡಲಲ್ಲಿ ಅವ್ವ



ಅವ್ವ ಮಲಗಿದ್ದಳು
ಕುಡಿದೀಪದೆದುರು
ಬದುಕ ಬೆಳಕಾಗಿ ಸೂಸಿ
ಉರಿಉಂಡು ನೊಂದು...

ನೀರವ ಮೌನದ
ನಡುವೆ ಬೆಚ್ಚಿಸಿದ
ಮಿಂಚು ಗುಡುಗು
ಅವ್ವನ ಎಬ್ಬಿಸದಾದವು

ಕುಯ್ಗುಡ್ಲು ಹಿಡಿದು
ಹೊಲದಲ್ಲಿ ಕಳೆಕಿತ್ತು
ನೆತ್ತಿ ಸುಡುವ ಬಿಸಿಲಲ್ಲಿ
ಹಣೆ ತುಂಬ
ಹನಿಮುತ್ತ ಹೊತ್ತು
ಅವ್ವ ದಣಿದಿದ್ದಳು ಆಗ...

ಹನಿಮುತ್ತ ಚೆಲ್ಲೈತೆ
ಹೊಲವೆಲ್ಲಾ ರಾಶಿರಾಶಿ
ತೆನೆಹೊತ್ತು ನಿಂತೈತೆ
ತಲೆಬಾಗಿ;
ಅವ್ವ ಮಲಗಿದ್ದಾಳೆ
ಅಲ್ಲೀಗ...

ಹೊಲ ಕುಯ್ದು
ಹೊಲ ಕಟ್ಟಿ
ಉಸಿರ ಬಿಗಿಹಿಡಿದು
ಹೊರೆ ಹೊತ್ತಿದ್ದಳು
ಅವ್ವ ಪ್ರತಿಸಾರಿ...

ಈಗ ಹೀಗಿಲ್ಲ
ಈಗಷ್ಟೆ ಮಲಗವಳೇ
ಹೊತ್ತು ಮುಳುಗುವ ಮುನ್ನ
ಬೆಚ್ಚಗೆ ಈ ಮಣ್ಣಿನ ಒಡಲಲ್ಲಿ...

3 comments:

Anonymous said...

sir..........varnisalu padagale illa...........

Anonymous said...

sir.............. nan amma thumba ista pttaru nim kavana ode..........

Venkatesh said...

Sir , Padagalalli varnisalu saadyavagadavalu amma , aadaru nimma kavana ammana manadalavannu mattomme nenapiside , kannirinodane mattomme odabekeniside....