ಕಣ್ಣಂಚಿನ ಹನಿಗಳು
ಕರಗಿ ಹೋಗಲಿ
ಜಡಿಮಳೆಯ
ಹನಿಯ ಜೊತೆಗೂಡಿ
ಜೀವ ಹಿಂಡುವ
ನೆನಪುಗಳಳಿಯಲಿ
ಬದುಕು-ಪ್ರೀತಿ
ಹಣೆಬರಹ ಬರೆಯಲಿ
ಕೆಟ್ಟ ಕನಸುಗಳು
ರಾತ್ರಿಗಳಲ್ಲೇ ಹುಟ್ಟಿ ಕ್ಷಣವೇ
ಸತ್ತು ಹೋಗಲಿ
ರೆಪ್ಪೆ ಮುಚ್ಚುವ ಮೊದಲು ಕಣ್ಮರೆಯಾಗಲಿ
- ಇಲ್ಲಿ
ಮೆಚ್ಚುಗೆಗೆ
ಕಾತರಿಸುವ, ತವಕಿಸುವ
ಸರತಿ ಸಾಲಿನ
ಸಾಲಿನಲ್ಲಿ
ಪ್ರೀತಿ ಕ್ಷಣವೂ ನಿಲ್ಲದಿರಲಿ...
ನಂಬಿಕೆಯ ಬಸುರಲ್ಲಿ
ಪ್ರೀತಿಯೇ ಹುಟ್ಟಲಿ
ಅದು ಸಾಯುವ ಮುನ್ನ...
ಕಣ್ಣಂಚಿನ ಹನಿ, ಕೊಲ್ಲುವ ನೆನಪು
ಕೆಟ್ಟ ಕನಸುಗಳು
ಒಮ್ಮೆಲ್ಲೇ ಜೀವ ಕಳೆದುಕೊಳ್ಳಲಿ
ಭರವಸೆಗಳ ಜೊತೆ...
ಜೀವಂತ ಶವದಂತೆ
ಎದುರುಗೊಳ್ಳುವ ಬದುಕ ದೂಡಿ...
-ಕೆ. ಪುರುಷೋತ್ತಮ
No comments:
Post a Comment