ನುಂಗಲಾರದ ಅಗುಳು
ಒಡಲ ಉರಿಯ ಬಸಿದು
ಧರೆಗೆ ಬೆಳಕ
ಚೆಲ್ಲುವ ಸೂರ್ಯ
ನಗುತ್ತಾನೆ
ಜಗವ ಕಂಡು
ಸ್ವಾರ್ಥ ಲೋಲುಪತೆಗೆ
ಬಿದ್ದು ಕಡಿದರಲ್ಲ
ಜೀವಾತ್ಮ ಮರಗಳ
ರುಂಡಮುಂಡ
ಬಿಡಲೊಲ್ಲದ ಛಲ
ಮತ್ತೆ ಚಿಗುರೊಡೆದಿದೆ
ಉಸಿರುಗಟ್ಟಿ ಬದುಕುವವರೆಡೆ
ಉಸಿರ ತುಂಬಿ ಕೊಟ್ಟರೂ
ಅವು ಮಾರಾಟದ ಸರಕಾದರೂ
ಹಸಿದ ಹೊಟ್ಟೆಗದು
ಕಾಯಕ, ಅಮೃತ
ಮತ್ತೆ ಹಲವರು
ಬೆತ್ತಲಾದರು
ಕತ್ತಲ ತಾಕಲಾಟದಲಿ
ಹಾಟ್-ಕೋಲ್ಡ್
ಬೆರೆಸಿ ಒರೆಸಿಕೊಂಡರೆ
ಬಂದೆರಗುವ ಕಾಲ ಕಷ್ಟಗಳ
ನುಂಗಲಾರದ ಅಗುಳು
ಮತ್ತಿನಲ್ಲಿದ್ದ ತಂದೆಗೆ
‘ಅಪ್ಪೋ, ನಾ ಏನಾ
ಕುಡಿಯಲಿ
ಹೊಡಿಬ್ಯಾಡ ಅವ್ವಂಗೆ
ನೋಡಾ, ಅವಳು ಬಸಿದ
ಅಕ್ಕಿಯ ಅಗಳು ಅರಳ್ಯಾವ’
ಎಂಬ ಕರುಳ ಕುಡಿಯ
ಬಾಗಿಲ ಸಂದಿಯ ದನಿಗೆ
ಕಿವುಡಾಯಿತೇ ಮತಿ....?
No comments:
Post a Comment