Thursday, December 16, 2010

ಅಂದು-ಇಂದು




ಅಂದು ಪ್ರೀತಿ
ತೂಗುತ್ತಿದ್ದ ಗೂಡಲ್ಲಿ
ತೆರೆದುಕೊಂಡ
ನೂರಾರು ಹಕ್ಕಿಗಳು
ಮುಗಿಲು ಚುಂಬಿಸುವ
ತವಕದಲ್ಲಿದ್ದವು

ಚುಂಬಿಸಿ, ಸಂಭ್ರಮಿಸಿದವು
ತನ್ಮಯತೆಯಿಂದ

ಇಂದು ಪ್ರೀತಿ
ಮುಚ್ಚಿಟ್ಟಿದ್ದ ಗೂಡಲ್ಲಿ
ತೆರೆದುಕೊಂಡ
ಹಳೆ ಸಾಮಾನುಗಳು
ಗುಜರಿ ಅಂಗಡಿಯ
ತೂಗುಗತ್ತಿಯಲ್ಲಿ ನೇತಾಡುತ್ತಿವೆ

ತುಕ್ಕಿಡಿದ ಸಾಮಾನುಗಳು
ಮಾರಲ್ಪಟ್ಟು ಮಗದೊಂದು
ಸಾಮಾನು ಮನೆಯ ಅಟ್ಟದಲ್ಲಡಗಿದೆ

No comments: