ನಿಮ್ಮ ವೀರಭದ್ರಸ್ವಾಮಿನಾ ನೀವ್ ಮಾಡಿ, ನಮ್ಮ ಆಂಜನೇಯಸ್ವಾಮಿ ನಾವ್ ಮಾಡ್ತೀವಿ...' -ಹೀಗೆ ಹೇಳಿದ್ದು ಮುಗ್ಧ ಜನರಲ್ಲ; ಧರ್ಮ, ದೇವರು, ಆಚರಣೆ ಅಂತ ದಿನಗಳಟ್ಟಲೇ ಪುಂಖಾನುಪುಂಖವಾಗಿ ಹೇಳುತ್ತಾ, ಮೌಢ್ಯತೆಯನ್ನು ಪ್ರದರ್ಶಿಸುವ ಬುದ್ಧಿವಂತ ಮಂದಿಗಳು.
****************
`ಪ್ರೀತಿಸುವುದು ತಪ್ಪಲ್ಲ` ಎಂದು ಸಮಾರಂಭವೊಂದರಲ್ಲಿ ಭಾಷಣ ಮಾಡುತ್ತಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮಗಳು ಪ್ರೀತಿಸುತ್ತಿದ್ದೂ ಅವರಿಗೆ ನುಂಗಲಾರದ ತುತ್ತಾಗಿತ್ತು.
*******************
`ನಾವೆಲ್ಲರು ಭಾರತೀಯರು' ಎಂದು ಪಾಠ ಮಾಡಿದ ಮೇಷ್ಟ್ರು, ಧರ್ಮದ ವಿಷಯ ಬಂದಾಗ ಅದ್ಯಾಕೋ ಬದಲಾಗುತ್ತಿದ್ದರು. ವಿದ್ಯಾರ್ಥಿಗಳಿಗೆ ಅದು ಇವತ್ತಿಗೂ ದ್ವಂದ್ವವಾಗಿದೆ.
*****************
ಹೇಳದೇ ಕೇಳಿದ ಪ್ರಶ್ನೆಗಳಿಂದ ಉತ್ತರಿಸಲು ತಡವಡಿಸಿದ ಪ್ರೇಯಸಿಗೆ `ಎಲ್ಲಿ ಅವನಿಗೆ ಎಲ್ಲವೂ ತಿಳಿಯುತ್ತೋ' ಎಂಬ ಭಯ. ಇದು ರೋಮಿಯೋ ಜ್ಯೂಲಿಯೆಟ್ ಕಥೆಯಲ್ಲ!
No comments:
Post a Comment