Tuesday, February 15, 2011

ಪ್ರೀತಿ ಹನಿಗಳು...

ಪ್ರೀತಿಯೆಂದರೆ ನಾನು ಮತ್ತು ಅವಳು, ನಮ್ಮ ನಡುವಿನ ಮೌನ, ಹೃದಯದ ಸಂಭಾಷಣೆಗಳು, ಹುಸಿಮುನಿಸು, ಒಂದು ಸಿಹಿಮುತ್ತು ಅದರಲ್ಲೂ ಚೌಕಸಿ ಅವಳದು ಎಂಬ ದೂರು (ವಿವರಣೆ ಬೇಡ), ಇವೆಲ್ಲವುಗಳ ಅನುಭವವಷ್ಟೆ. ಅಂತಹ ಅನುಭವ ನನಗಂತೂ ಆಗಿಲ್ಲ; ನಿಮ್ಮದಾದರೂ ಆಗಲಿ ಎಂಬುದಷ್ಟೆ ನನ್ನ ಹಾರೈಕೆ... - ನಿಮ್ಮ ಪುರು

ಸೆರೆ

ಎಷ್ಟೋ ಬಾಲೆಯರು
ಅಪ್ಸರೆಯರೇ..
ಆದರೂ ನಾನಾಗಲಿಲ್ಲ
ಅವರ ಸೌಂದರ್ಯಕ್ಕೆ ಸೆರೆ.


ಹಾರೈಕೆ

ಸವಿಯಾಗಲಿ ನಿನ್ನ
ಕಹಿಯಾದ ನೆನಪುಗಳು
ಸಿಹಿಯಾಗಲಿ ನಿನ್ನ
ಸವಿಯಾದ ಕನಸುಗಳು


ನೆನಪು

ಹೇಗೆ ಮರೆಯಲಿ ನಿನ್ನ
ಕಣ್ಣ ಮುಂದೆ ಅಣಕಿಸುವ
ನಿನ್ನ ನೆನಪುಗಳನ್ನ...

ತವಕ...

ಹೃದಯದ ಪ್ರತಿ ಬಡಿತ
ಗೀಚಿಟ್ಟ ಒಲುಮೆ ಪತ್ರ
ನಿನ್ನುಸಿರು
ಆ ಮೌನ
ಹೇಳಲಾಗದ ತೊಳಲಾಟ
ಏಕಾಂತವನ್ನು ಏನೆಂದುಕೊಂಡೆ
ನೀನು....

ನಾನ್ಯಾರು?

ನಿನ್ನ ಹೆಜ್ಜೆಯನ್ನು ಹಿಂಬಾಲಿಸಿದ,
ನಿನ್ನ ಮೊಗದಲ್ಲಿ ಅರಳಿದ,
ನಿನ್ನೊಳಗೆ ಗುನುಗುಟ್ಟುತ್ತಿರುವ,
ನಿನ್ನ ಹಾರ್ಡ್‌ವೇರ್ ಹೃದಯಕ್ಕೆ
ಪ್ರೀತಿಯ ಸಾಫ್ಟ್‌ವೇರ್ ತುಂಬಿದ
ನಾನ್ಯಾರು?


ವಿಪರ್ಯಾಸ...

ಅವಳು ನಕ್ಕರೇ...
ಮುತ್ತುಗಳ ಸಾಲು ಸಾಲು.
ಅವಳು ಅತ್ತರೂ...
ಸಾಲು ಸಾಲು ಮುತ್ತುಗಳು.
ವಿಪರ್ಯಾಸವೆಂದರೆ ಇದೇನಾ!



ಮೋಹ

ಪ್ರೀತಿ ಕುರುಡು,
ಹೆಣ್ಣು ಮಾಯೆ,
ಗಂಡು ಎರಡನ್ನು
ಬಯಸುವ ಮೋಹಿ.

ಬಯಕೆ

ಭಾವಗಳೇ ಇಲ್ಲದವರ
ನಡುವೆ ನನ್ನದೊಂದು ಕನಸು,
ಹೇಳುತೀನಿ ಎಂದರೂ
ಕೇಳುತ್ತಿಲ್ಲ ಮನಸ್ಸು.

ಪ್ರೀತಿ

ಅವಳಿಗೆ ಆಸೆಯಿದೆ
ನನಗೆ ಜೋಬಿದೆ
ಹಣ ಮಾತ್ರವಿಲ್ಲ.
ಅವಳಿಗೆ ನಾನೇ ಬೇಕು
ನನಗೆ ಅವಳ ಪ್ರೀತಿ ಸಾಕು
ಇದು ಎಲ್ಲರಿಗೂ ಅರ್ಥವಾಗಬೇಕು.


ಪ್ರೀತಿ-೧

ಭಾವನೆಯ ಕಡಲಲ್ಲೂ
ಉಕ್ಕುತ್ತಿದೆ ಪ್ರೀತಿ...
ಅವಳ ಕಣ್ಣಲು
ತುಂಬಿರುವುದು ಪೀರುತಿ...


ಪ್ರೀತಿ-೨

ಪ್ರೇಮಿಗಳಿಗೆ ಮಾತುಗಳೇ ಸ್ಫೂರ್ತಿ,
ನೋಟಗಳೇ ಶಕ್ತಿ,
ಎಲ್ಲಕ್ಕಿಂತ ಹೆಚ್ಚು
‘ಹೃದಯಗಳ ನಂಬಿಕೆ’

5 comments:

Anonymous said...

chennagide.......................

Anonymous said...

hi pur it was nice kavithe kano.... yella ok adh yarapa a hudgi swlpa heltiya..............................

Unknown said...

neevu yaaru antha nange gotillavalla heloke...

Anonymous said...

ಅಂತಹ ಅನುಭವ ನನಗಂತೂ ಆಗಿಲ್ಲ; ನಿಮ್ಮದಾದರೂ ಆಗಲಿ ಎಂಬುದಷ್ಟೆ ನನ್ನ ಹಾರೈಕೆ.
omg.............
sir antha anubhawa nangu agillaa nimma yella blesng ok idu matra beda........ sir...... ha ha haaaa

Anonymous said...

'viparyasa' anthuuuuu
nijavagluuuuuuuu viparyasa avagide sir.................