Sunday, March 6, 2011

ಪ್ರೀತಿ-ಅ(ಪಾ)ರ್ಥ


ನಿನ್ನವ...

ನನ್ನೆದೆಯ ತಳಮಳಗಳು
ನಿನ್ನ ಮನದ ಅರ್ಥಗಳನ್ನು
ನಿಘಂಟುಗಳಲ್ಲಿ
ಹುಡುಕಿ ಬಿಟ್ಟಿದ್ದರೆ
ಅವು ಬಚಾವ್ ಆಗುತ್ತಿದ್ದವೇನೋ...

ಬಿರುಗಾಳಿ ಎದ್ದು
ಮಗ್ಗಲು ಮುರಿದು ಬಿದ್ದ ಮೈಗೆ
ನಿನ್ನ ನೆನಪುಗಳ ಸುಳಿ
ಜೀವಹಿಂಡಿ ಕುಂತಿವೆ
ನಿರಾಶೆಯ ದಿನಗಳು
ನಾಳೆಗಳನ್ನು ಕೊಂದು ಜೀವಿಸುತ್ತಿವೆ
ಇನ್ನುಳಿದ ದಿನಗಳಷ್ಟೋ
ಅನುಭವಿಸಲು ಸಿದ್ಧನಾಗುತ್ತೇನೆ...

*************
ನಿನ್ನವಳು

ಪ್ರಶ್ನೆಯಾಗಿ ಉಳಿದರೆ
ಉಳಿಯಲಿ
ನನ್ನ ಉತ್ತರವೊಂದೇ
ಮರೆತು ಬಿಡು!

*************
ನೆನಪು

ಆ ನಗುವು
ಪಿಳಿ ಕಣ್ಣು
ಹೈ ಹಿಲ್ಡ್ ಚಪ್ಪಲಿಯ ನಡಿಗೆ
ಕೈಗಳ ಬೆಸೆದು
ದಾರಿಗಂಟಿ ಸಾಗಿದೆ...

**********
ಮನಸ್ಸು

ನಾ ಮೇಲು, ನೀ ಮೇಲು
ಮೇಲಿನವನಿಗಿರಲಿ
ಈಗ ಕೊರಗುವುದರಲ್ಲೇನಿದೆ?
ಪ್ರತಿಷ್ಠೆಯ ಹೋರಾಟದಲ್ಲಿ
ಪ್ರೀತಿ, ಕನಸು, ಆಸ್ಥೆಗಳು
ಸೋಲು ಕಂಡವಲ್ಲ....

1 comment:

Anonymous said...

sir..... super ......