Monday, April 25, 2011

ಹನಿಗವನ

ಬೆವರ ಹನಿಗಳು

ಅವಳ ಬಿಗಿ ಅಪ್ಪುಗೆಗೆ
ಅವನ ಮೈ ಚಳಿ
ಬೆವರ ಹನಿಗಳೊಳಗೂಡಿ
ಜಿನುಕಿತು...

***********

ಸಹಜ

ಎಲ್ಲವು ದಕ್ಕುವುದಿಲ್ಲ
ನುಡಿದಂತೆ, ನಡೆದಂತೆ!
ಹಕ್ಕಿಯೊಂದು
ಈ ಮರವು ನಂದೆಂದಿತು
ಗಾಳಿ, ಮಳೆಗೆ
ಮರ ನಲುಗಿತು

***********

ಭ್ರಷ್ಟಾಚಾರ

ಭ್ರಷ್ಟರೇ ಭ್ರಷ್ಟಾಚಾರದ
ವಿರುದ್ಧ ದನಿಯೆರಿಸಿದಾಗ
ಭ್ರಷ್ಟಾಚಾರ ನಿರ್ಮೂಲನಾ ಸಮಿತಿ
ವರದಿ ಸಲ್ಲಿಸಲಾಗದೆ ಸುಮ್ಮನಾಯಿತು...

***********