Thursday, May 12, 2011

ನಿಮಗೂ ಇಷ್ಟವಾಗಬಹುದು...!



ಸಿಗದುದ್ದನ್ನು ಪಡೆಯುವ ಹಂಬಲ
ದಕ್ಕಿದ್ದನ್ನು ಅನುಭವಿಸಲು ಬಿಡದ ಕಾಲ
ಹಾಗೆ ಕಳೆದಿವೆ...
ಯೌವನ-ವೃದ್ಧಾಪ್ಯ.

************

ತನ್ನ
ಸುತ್ತಲಿನ ಬದುಕಿನ ನಾಟಯಕೀಯತೆಗೆ ಬೇಸತ್ತವನು
ಬಣ್ಣ ಹಚ್ಚಿ ನಟಿಸಿದ
ನಾಟಕಕ್ಕೆ ಮನಸೋತ!

************


ಪ್ರಸ್ತುತ
ಒಂದಾದರೂ ಇವೆಯೇ ರೋಮಿಯೋ-ಜ್ಯೂಲಿಯಟ್ ಕಥೆಗಳು...?
ಕೇಳಿದ್ದೀರಬಹುದು ನೀವು
ಈ ಕಾಲದ ರೋಮಿಯೋ
ಜ್ಯೂಲಿಯಟ್‌ಳ ಸಾಂಗತ್ಯ ತೊರೆದು
ಅನಾರ್ಕಲಿಯ ಸೌಂದರ್ಯವನ್ನು ಆರಾಧಿಸುತ್ತಿದ್ದುದು...
ಅಲ್ಲವೇ?

************


ಪ್ರೀತಿಗೆ
ಜಾತಿ ಸೋಂಕು ತಗುಲಿಸಿದ
ಮಹನೀಯನೊಬ್ಬ
ಕಾಮಕ್ಕೆ ಜಾತಿ ಎಲ್ಲಿದೆ ಎಂದು
ಬೆತ್ತಲಾದ!

************


ಮನುಷ್ಯನ
ಆಸೆಗಳು
ಮೈತಳೆದಂತೆ
ಅವನ ಬಯಕೆಗಳು
ದುಬಾರಿಯಾಗುತ್ತವೆ.

************


ಅವನು
ಬದುಕಿನ ಕಥೆ ಹೇಳಿ
ಮುಗಿಸಿದ ನಂತರ
ಅವಳಿಗೆ ಅವನಲ್ಲಿ ಪ್ರೀತಿ ಅಂಕುರಿಸಿತು

ವಿಪರ್ಯಾಸವೆಂದರೆ
ಅದು ಸಿನಿಮೀಯ ಕಥೆಯೆಂದು
ಅರಿವಿಗೆ ಬಂದದ್ದು ಮಾತ್ರ
ಅವಳು ಅವನ ಮದುವೆಯಾದ ನಂತರ...

************


ಪ್ರೀತಿಯಿಂದಾಗಿ
ಮಾನಸಿಕವಾಗಿ ಬಳಲಿದ
ಭಗ್ನಪ್ರೇಮಿಗೆ
ಮನೋವೈದ್ಯರು ನೀಡಿದ ಸಲಹೆ
ಮತ್ತೊಬ್ಬಳ ಪ್ರೀತಿಸು, ಮೊದಲಿನಂತಾಗುತ್ತೀಯ
ಇದನ್ನೇ ಪಾಲಿಸಿದ
ಭಗ್ನ ಪ್ರೇಮಿಯ ಬದುಕಿನಲ್ಲಿ
ಅದು ನಿರಂತರವಾಗಿ ಸಾಗಿದೆ.

No comments: